ಯೋಜನೆಯ ಪ್ರಸ್ತಾವ- ಡೆಮೋಕ್ರೆಝೀಲಿ ಸೈನ್ಸ್ (ಬಾಹ್ಯಾಕಾಶ ವಿಜ್ಞಾನದ ಪ್ರಜಾಪ್ರಭುತ್ವ ) : ಖಗೋಳಶಾಸ್ತ್ರದ ಬಗೆಗಿನ ವಿಚಾರಗಳನ್ನು ಎಲ್ಲರಿಗೂ ತಲುಪುವಂತೆ ಮಾಡೋಣ

announcements Sep 10, 2023

ಡೆಮೋಕ್ರೆಝೀಲಿ ಸೈನ್ಸ್ ಒಂದು ಮಹತ್ವಾಕಾಂಕ್ಷೆಯ ಯೋಜನೆಯಾಗಿದ್ದು, ಇದು ಎಲ್ಲ ವಯಸ್ಸಿನ ವ್ಯಕ್ತಿಗಳಲ್ಲಿ ವೈಜ್ಞಾನಿಕತೆ ಮತ್ತು ಅಂತರಿಕ್ಷದ ಬಗ್ಗೆ ಕುತೂಹಲ ಮತ್ತು ಆಶ್ಚರ್ಯ ಹುಟ್ಟಿಸುವ ಧ್ಯೇಯದ ಮೇಲೆ ವಿನ್ಯಾಸ ಮಾಡಲಾಗಿದೆ. ಈ ಕಾರ್ಯಕ್ರಮದ ಭಾಗವಾಗಿ, Open Space Foundation(OSF) ಒಂದು ವಿಶಿಷ್ಟ ಪ್ರಯತ್ನವನ್ನು ಕೈಗೊಳ್ಳುತ್ತಿದೆ. ಸೆಪ್ಟೆಂಬರ್ 22 ರಿಂದ ಪ್ರಾರಂಭವಾಗಿ ಅಕ್ಟೋಬರ್ 3 ರವರೆಗೆ, ಐದು OSF ಸ್ವಯಂಸೇವಕರು ದಕ್ಷಿಣ ಕರ್ನಾಟಕದಲ್ಲಿ ಪ್ರವಾಸ  ಮಾಡಲಿದ್ದೇವೆ. ಈ ಪ್ರವಾಸದ 8 ದಿನಗಳಲ್ಲಿ, 10-15 ಶಾಲೆಗಳು ಮತ್ತು 4 - 5 ಹಳ್ಳಿಗಳಲ್ಲಿ ಹಗಲು ಮತ್ತು ರಾತ್ರಿ ಖಗೋಳ ವೀಕ್ಷಣೆ ಅಧಿವೇಶನಗಳನ್ನು ಆಯೋಜಿಸಿದ್ದೇವೆ.

ಎರಡು 5-ಇಂಚಿನ ಪ್ರತಿಬಿಂಬಕ ಪ್ರಕಾರದ ದೂರದರ್ಶಿಗಳು ಮತ್ತು ಎರಡು ವಕ್ರೀಕಾರಕ ಮಾದರಿಯ  ದೂರದರ್ಶಿಗಳೊಂದಿಗೆ, OSF ತಂಡ ಅನೇಕ ಜನರಿಗೆ ಮೊದಲ ಬಾರಿಗೆ ಆಕಾಶದಲ್ಲಿ ಖಗೋಳಾಂಗಗಳನ್ನು ವೀಕ್ಷಿಸುವ ಅವಕಾಶವನ್ನು ಒದಗಿಸಲಿದೆ. ಖಗೋಳ ವಿಜ್ಞಾನದ ಬಗೆಗಿನ ಉತ್ಸಾಹ ಮತ್ತು ಮಹತ್ವವನ್ನು ಹೆಚ್ಚಿಸುವ ಸಲುವಾಗಿ, ಈ ಕಾರ್ಯಕ್ರಮವನ್ನು  ಗೌರವಯುತ ಚಂದ್ರಯಾನ-III ಪ್ರಯಾಣ ಮತ್ತು ಅಂತರಾಷ್ಟ್ರೀಯ ಚಂದ್ರ ದಿನಾಚರಣೆಯೊಂದಿಗೆ ಹೊಂದಿಕೆಯಾಗುವಂತೆ ಯೋಜನೆ ಮಾಡಲಾಗಿದೆ.

ಶೈಕ್ಷಣಿಕ ಸಂಸ್ಥೆಗಳು ಮತ್ತು ಹಳ್ಳಿಗಳನ್ನು ತೊಡಗಿಸಿಕೊಳ್ಳಲು ಕಾರ್ಯಕ್ರಮವನ್ನು ಚಿಂತನಶೀಲವಾಗಿ ವಿನ್ಯಾಸಗೊಳಿಸಲಾಗಿದೆ. ಪ್ರತಿ ದಿನವನ್ನು ಮೂರು ಸಮಯದ ಭಾಗವಾಗಿ ವಿಂಗಡಿಸಲಾಗಿದೆ: 10AM - 12PM, 2PM - 4PM, ಮತ್ತು 6:30PM - 9:00PM. ಬೆಳಗಿನ ಮತ್ತು ಮದ್ಯಾಹ್ನದ ಭಾಗವನ್ನು ಶಿಕ್ಷಣ ಸಂಸ್ಥೆಗಳಿಗೆ ಮೀಸಲಿಟ್ಟರೆ, ಸಂಜೆಯ  ಹಳ್ಳಿಗಳು ಅಥವಾ ಪಂಚಾಯತ್‌ಗಳನ್ನು ಪೂರೈಸುತ್ತವೆ. ಆಕಾಶ ವೀಕ್ಷಣೆಯ ಜೊತೆಗೆ ಖಗೋಳಶಾಸ್ತ್ರವನ್ನು ಪರಿಚಯಿಸುವ ಅಧಿವೇಶನವನ್ನು ನಡೆಸಲಾಗುವುದು. ಈ ಕಾರ್ಯಕ್ರಮ ವಿದ್ಯಾರ್ಥಿಗಳು ಮತ್ತು ಗ್ರಾಮಸ್ಥರಲ್ಲಿ ಜ್ಞಾನ ಮತ್ತು ಆಸಕ್ತಿಯನ್ನು ಉತ್ತೇಜಿಸುತ್ತದೆ.

ಈ ಯೋಜನೆಯ ಉದ್ದೇಶಗಳು ಈ ಕೆಳಗಿನಂತಿವೆ:

  1. ಚಂದ್ರಯಾನ III ಮತ್ತು ಆದಿತ್ಯ L1 ನಿಯೋಗದ ಬಗೆಗೆ ಗಮನ ಹರಿಸುವ ಸಲುವಾಗಿ ಬಾಹ್ಯಾಕಾಶದ  ಅನ್ವೇಷಣೆಯಲ್ಲಿ ಆಸಕ್ತಿಯನ್ನು ಮೂಡಿಸಿ ಅರಿವನ್ನು ಹೆಚ್ಚಿಸುವುದು.
  2. ಸೂರ್ಯ, ಚಂದ್ರ ಮತ್ತು ಇತರ ಖಗೋಳಾಂಗಗಳ (ಆಕಾಶ ಕಾಯಗಳು) ಬಗ್ಗೆ ಸಾರ್ವಜನಿಕರಿಗೆ ಶಿಕ್ಷಣ ನೀಡಿ, ಅವುಗಳ ಭೂವೈಜ್ಞಾನಿಕ ವೈಶಿಷ್ಟ್ಯಗಳು ಮತ್ತು ವೈಜ್ಞಾನಿಕ ಸಂಶೋಧನೆಯಲ್ಲಿ ಅವುಗಳ ಪ್ರಾಮುಖ್ಯತೆಯ ಒಳನೋಟಗಳನ್ನು ತಿಳಿಸುವುದು.
  3. ಚಂದ್ರ ಮತ್ತು ಇತರೆ ಆಕಾಶ ಕಾಯಗಳನ್ನು  ದೂರದರ್ಶಕದ ಅವಲೋಕನಗಳ ಮೂಲಕ ಸಂವಾದಾತ್ಮಕ ಮತ್ತು ತಲ್ಲೀನಗೊಳಿಸುವ ಅನುಭವವನ್ನು ನೀಡಿ, ಭಾಗವಹಿಸುವವರು ಬ್ರಹ್ಮಾಂಡದ ಅದ್ಭುತಗಳನ್ನು ನೇರವಾಗಿ ವೀಕ್ಷಿಸಲು ಅನುವು ಮಾಡಿಕೊಡುವುದು.
  4. ಯುವಕರ ಭಾಗವಹಿಸುವಿಕೆಯನ್ನು ಪ್ರೋತ್ಸಾಹಿಸುವುದು  ಮತ್ತು ವಿವಿಧ STEAM (ವಿಜ್ಞಾನ, ತಂತ್ರಜ್ಞಾನ, ಎಂಜಿನಿಯರಿಂಗ್, ಕಲೆ ಮತ್ತು ಗಣಿತ) ಕ್ಷೇತ್ರಗಳಲ್ಲಿ ಅವರ ಆಸಕ್ತಿಯನ್ನು ಉತ್ತೇಜಿಸಿಸುವುದು.

ಈ ಉದ್ದೇಶಗಳ ಮೂಲಕ, OSF ವಿಜ್ಞಾನ ಮತ್ತು ಬಾಹ್ಯಾಕಾಶದ ಬಗ್ಗೆ ಕೌತುಕ ಮತ್ತು ಕುತೂಹಲದ ಪ್ರಜ್ಞೆಯನ್ನು ಪ್ರೇರೇಪಿಸುತ್ತದೆ, ವೈಜ್ಞಾನಿಕ ಸಾಕ್ಷರತೆಯನ್ನು ಉತ್ತೇಜಿಸುತ್ತದೆ ಮತ್ತು ಸಂಬಂಧಿತ ವಿಭಾಗಗಳಲ್ಲಿ ಜ್ಞಾನದ ಅನ್ವೇಷಣೆಯನ್ನು ಉತ್ತೇಜಿಸುತ್ತದೆ.

ಕಾರ್ಯಕ್ರಮದ ವೇಳಾಪಟ್ಟಿ:

ಸ್ಥಳ ದಿನಗಳು ಸಾಧ್ಯವಾದ ಸ್ಲಾಟ್‌ಗಳು
ದಿನಾಂಕ
ಮೈಸೂರು 1 ಅನಾಥಾಶ್ರಮ ಭೇಟಿ ಮತ್ತು ಹುಲ್ಲೇನಹಳ್ಳಿ
ಸೆಪ್ಟೆಂಬರ್ 24
ತುಮಕೂರು 2 4 ಸರ್ಕಾರಿ ಮತ್ತು ಸರ್ಕಾರಿ ಅನುದಾನಿತ ಶಾಲೆ ಮತ್ತು 2 ಹಳ್ಳಿ
ಸೆಪ್ಟೆಂಬರ್ 25
ಮಂಗಳೂರು 2 4 ಸರ್ಕಾರಿ ಮತ್ತು ಸರ್ಕಾರಿ ಅನುದಾನಿತ ಶಾಲೆ ಮತ್ತು 1 ಹಳ್ಳಿ
ಸೆಪ್ಟೆಂಬರ್ 28
ಶಿವಮೊಗ್ಗ 2 4 ಸರ್ಕಾರಿ ಮತ್ತು ಸರ್ಕಾರಿ ಅನುದಾನಿತ ಶಾಲೆ ಮತ್ತು 2 ಹಳ್ಳಿ
ಸೆಪ್ಟೆಂಬರ್ 30



ನಿರೀಕ್ಷಿತ ಫಲಿತಾಂಶಗಳು:

  1. ಸಾರ್ವಜನಿಕರಲ್ಲಿ ಬಾಹ್ಯಾಕಾಶ ಪರಿಶೋಧನೆಯಲ್ಲಿ ಹೆಚ್ಚಿದ ಅರಿವು ಮತ್ತು ಆಸಕ್ತಿ, ವಿಶೇಷವಾಗಿ ಚಂದ್ರಯಾನ III ನಿಯೋಗದ ಬಗ್ಗೆ, ಭಾಗವಹಿಸುವವರಲ್ಲಿ ಉತ್ಸಾಹ ಮತ್ತು ಕುತೂಹಲದ ಪ್ರಜ್ಞೆಯನ್ನು ಬೆಳೆಸುತ್ತದೆ.
  2. ಭಾಗವಹಿಸುವವರು ಚಂದ್ರನ ಸಂಶೋಧನೆ ಮತ್ತು ಪರಿಶೋಧನೆಯ ಬಗ್ಗೆ ಮೌಲ್ಯಯುತವಾದ ಒಳನೋಟಗಳನ್ನು ಪಡೆಯಲು ಅನುವು ಮಾಡಿಕೊಡುತ್ತದೆ.
  3. ಪ್ರದೇಶದಲ್ಲಿ ಖಗೋಳಜ್ಞಾನ ಪ್ರಸಾರ ಚಟುವಟಿಕೆಗಳ ಸಾಧ್ಯತೆಯನ್ನು ಹೊಂದಿಸುವ ಮತ್ತು ವಿಜ್ಞಾನ ಮತ್ತು ಖಗೋಳಶಾಸ್ತ್ರದೊಂದಿಗೆ ನಿರಂತರ ತೊಡಗಿಸುವಿಕೆಯನ್ನು ಪ್ರೋತ್ಸಾಹಿಸುವ, ಕೇಂದ್ರೀಭೂತ ದೂರದರ್ಶಕ ಯಂತ್ರವ್ಯವಸ್ಥೆಯ ಸ್ಥಾಪನೆ.
  4. ವಿಜ್ಞಾನ ಶಿಕ್ಷಣಾ, ವೈಜ್ಞಾನಿಕ ಮನೋಭಾವ ಮತ್ತು ಪ್ರಸಾರದ ಪ್ರೋತ್ಸಾಹನೆಯಲ್ಲಿ ಸಮುದಾಯ  ತೊಡಗಿಸುವಿಕೆ ಮತ್ತು ಸಹಯೋಗದ ಪ್ರಬಲೀಕರಣ, ವೈಜ್ಞಾನಿಕ ಕೌತೂಹಲ ಮತ್ತು ಅನ್ವೇಷಣೆಯ ಸಂಸ್ಕೃತಿಯನ್ನು ಬೆಳೆಸುವುದು.

ಬಜೆಟ್ ಮತ್ತು ಧನಸಹಾಯ: ಡೆಮಾಕ್ರಝೀಲಿ ಸೈನ್ಸ್ ಪ್ರಾಜೆಕ್ಟ್ ಅನ್ನು ಯಶಸ್ವಿಯಾಗಿ ಕಾರ್ಯಗತಗೊಳಿಸಲು, ನಾವು 65,000 INR ಮೊತ್ತದಲ್ಲಿ ಹಣಕಾಸಿನ ಬೆಂಬಲವನ್ನು ಬಯಸುತ್ತಿದ್ದೇವೆ. ಈ ನಿಧಿಯು ಸಂಪನ್ಮೂಲ ವ್ಯಕ್ತಿಗಳಿಗೆ ಸಲಕರಣೆ ಸಾಗಣೆ, ಬೋರ್ಡಿಂಗ್ ಮತ್ತು ವಸತಿ, ಸಾರಿಗೆ ವೆಚ್ಚಗಳು, ಸ್ವಯಂಸೇವಕ ತರಬೇತಿ, ಪ್ರಚಾರ ಸಾಮಗ್ರಿಗಳು ಮತ್ತು ಇತರ ವ್ಯವಸ್ಥಾಪನಾ ಅಗತ್ಯತೆಗಳು ಸೇರಿದಂತೆ ವಿವಿಧ ವೆಚ್ಚಗಳನ್ನು ಒಳಗೊಂಡಿರುತ್ತದೆ.

ಕಾರಣ ಲೆಕ್ಕಾಚಾರ ವೆಚ್ಚ (ರೂ)
ಪೆಟ್ರೋಲ್ 150L @102 ರೂ 15000
ಕಾರು ಮತ್ತು ಉಪಕರಣ ವೆಚ್ಚ 7000
ಆಹಾರ ಪ್ರತಿ ವ್ಯಕ್ತಿಗೆ ಪ್ರತಿ ದಿನ 300 * 6 ಜನ (1 ಜಿಲ್ಲೆಯ ಸ್ವಯಂಸೇವಕರು ಸೇರಿದಂತೆ) * 8 ದಿನಗಳು (ಹಿಂತಿರುಗುವುದು ಸೇರಿದಂತೆ) 6000
ವಾಸ 3000 (3 ಕೊಠಡಿಗಳು) * 2 ದಿನಗಳು 6000
ಮೊದಲನೆಯ ಸಹಾಯ ಮತ್ತು ಇತರ ಭದ್ರತಾ ವೆಚ್ಚಗಳು 7000
ಪೂರ್ಣಕಾಲಿಕ ಸ್ವಯಂಸೇವಕರಿಗೆ ವೇತನ 5000 × 3 15000
ಪ್ರತಿ ಶಾಲೆಗೆ ಖಗೋಳಜ್ಞಾನ ಉಡುಗೊರೆಗಳು ಮತ್ತು ಪ್ರಚಾರ ಸಾಮಗ್ರಿ 2000 × 25 ಶಾಲೆಗಳು (ಗರಿಷ್ಠ) 50000
ಒಟ್ಟು ಬಜೆಟ್ 65000

ನಮ್ಮ ಹಿತೈಷಿಗಳು, ಸಹಭಾಗಿ ಸಂಸ್ಥೆಗಳು, ವಿಜ್ಞಾನ ಮತ್ತು ತಂತ್ರಜ್ಞಾನ ಸಂಸ್ಥೆಗಳು ಮತ್ತು ಕಂಪನಿಗಳು ನಮ್ಮೊಂದಿಗೆ ಕೈಜೋಡಿಸುವಂತೆ ಮತ್ತು ಈ ಕಾರ್ಯಕ್ರಮದ ಅದ್ಭುತ ಯಶಸ್ಸನ್ನು ಖಚಿತಪಡಿಸಿಕೊಳ್ಳಲು ಅಗತ್ಯವಾದ ಆರ್ಥಿಕ ಬೆಂಬಲವನ್ನು ನೀಡುವಂತೆ ನಾವು ಪ್ರಾಮಾಣಿಕವಾಗಿ ಮನವಿ ಮಾಡುತ್ತೇವೆ. ನಿಮ್ಮ ಉದಾರ ಕೊಡುಗೆಯಿಂದ ಕರ್ನಾಟಕದ ಸಮುದಾಯಗಳಿಗೆ ಪ್ರಯೋಜನವಾಗುವುದಲ್ಲದೆ, ಕಾರ್ಪೊರೇಟ್ ಸಾಮಾಜಿಕ ಹೊಣೆಗಾರಿಕೆ (CSR) ಸೇರಿದಂತೆ ನಿಮ್ಮ ಸಾಮಾಜಿಕ ಜವಾಬ್ದಾರಿ ಉದ್ದೇಶಗಳೊಂದಿಗೆ ಹೊಂದಿಕೆಯಾಗುತ್ತದೆ. ವಿಜ್ಞಾನದ ಅರಿವು, ವೈಜ್ಞಾನಿಕ ಮನೋಧರ್ಮ ಮತ್ತು ಸಮುದಾಯದ ತೊಡಗಿಸಿಕೊಳ್ಳುವಿಕೆಗೆ ನಿಮ್ಮ ಬದ್ಧತೆಯನ್ನು ನಾವು ಪ್ರಶಂಸಿಸುತ್ತೇವೆ.

ನೀವು ಅನುದಾನ ನೀಡಲು ಬಯಸಿದರೆ, ದಯವಿಟ್ಟು ಈ ಕೆಳಗಿನ OSF ಬ್ಯಾಂಕ್ ಖಾತೆಯ ವಿವರಗಳಿಗೆ ಕಳುಹಿಸಿ:
                 ಖಾತೆ ಸಂಖ್ಯೆ: 800010110009983
                ಖಾತೆಯ ಹೆಸರು: Open Space Foundation
                ಬ್ಯಾಂಕ್: Bank of India
                IFSC: BKID0008000

ಎಲ್ಲಾ ದೇಣಿಗೆಗಳು 80G ಪ್ರಮಾಣಪತ್ರಕ್ಕೆ (50% ಸ್ಲ್ಯಾಬ್) ಅರ್ಹವಾಗಿರುತ್ತವೆ ಎಂದು ನಿಮಗೆ ತಿಳಿಸಲು ನಾವು ಸಂತೋಷಪಡುತ್ತೇವೆ. ಇದರಿಂದ ನೀವು ನಮಗೆ ಕೊಡುವ ಆರ್ಥಿಕ ನೆರವಿಗೆ ತೆರಿಗೆ ಪ್ರಯೋಜನಗಳನ್ನು ಪಡೆಯಲು ನಿಮಗೆ ಅವಕಾಶ ಸಿಗುತ್ತದೆ.

ದೊಡ್ಡ ಸಂಸ್ಥೆಗಳು, CSR ಉಪಕ್ರಮಗಳು, ಅನುದಾನಗಳು ಅಥವಾ ಇತರ ರೀತಿಯ ದೇಣಿಗೆಗಳಲ್ಲಿ ಆಸಕ್ತಿ ಹೊಂದಿರುವ ಸಂಸ್ಥೆಗಳು, contact@openspacefoundation.in ನಲ್ಲಿ ನಮ್ಮನ್ನು ಸಂಪರ್ಕಿಸಲು ನಾವು ನಿಮ್ಮನ್ನು ವಿನಂತಿಸುತ್ತೇವೆ ಅಥವಾ +91-9916394958 ಗೆ ಕರೆ ಮಾಡಿ. ಸಹಯೋಗದ ಸಾಧ್ಯತೆಗಳನ್ನು ಚರ್ಚಿಸಲು ಮತ್ತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳು ಅಥವಾ ಕಾಳಜಿಗಳ ಬಗ್ಗೆ ಮಾತನಾಡುವುದಿದ್ದರೆ ದಯವಿಟ್ಟು ನಮ್ಮನ್ನು ಸಂಪರ್ಕಿಸಿ.

ಎಲ್ಲರೂ ಸೇರಿ ವಿಜ್ಞಾನವನ್ನು ಎಲ್ಲರಿಗೂ ತಲುಪುವಂತೆ ಮಾಡೋಣ. ಡೆಮೋಕ್ರೆಝೀಲಿ ಸೈನ್ಸ್  ಕಾರ್ಯಕ್ರಮವು  ಜನರನ್ನು ಬಾಹ್ಯಾಕಾಶವನ್ನು ತಿಳಿಯುವ ಬಗ್ಗೆ ಪ್ರೇರೇಪಿಸುವ ಸಾಮರ್ಥ್ಯವನ್ನು ಹೊಂದಿದೆ ಎಂದು ನಾವು ದೃಢವಾಗಿ ನಂಬುತ್ತೇವೆ. ಚಂದ್ರನ ಅದ್ಭುತಗಳನ್ನು ಅನ್ವೇಷಿಸಲು ಮತ್ತು ವೈಜ್ಞಾನಿಕ ಆವಿಷ್ಕಾರಕ್ಕಾಗಿ ಉತ್ಸಾಹವನ್ನು ಬೆಳೆಸಲು ಎಲ್ಲರಿಗೂ ಅನುವು ಮಾಡಿಕೊಡುತ್ತದೆ. ನಮ್ಮೊಂದಿಗೆ ಸಹಕರಿಸುವ ಮೂಲಕ, ನೀವು, ನಿಮ್ಮ ಸಂಸ್ಥೆ ಅಥವಾ ನಿಮ್ಮ ಕಂಪನಿಯು, ವಿಜ್ಞಾನ ಶಿಕ್ಷಣವನ್ನು ಉತ್ತೇಜಿಸುವಲ್ಲಿ ಮತ್ತು ನಮ್ಮ ಸಮಾಜದಲ್ಲಿ ನಾವೀನ್ಯತೆಯ ಸಂಸ್ಕೃತಿಯನ್ನು ಪೋಷಿಸುವಲ್ಲಿ ಗಮನಾರ್ಹ ಪರಿಣಾಮ ಬೀರುತ್ತದೆ.

ಈ ಪ್ರಸ್ತಾಪವನ್ನು ಮತ್ತಷ್ಟು ಚರ್ಚಿಸಲು ಮತ್ತು ನಿಮಗೆ ಅಗತ್ಯವಿರುವ ಯಾವುದೇ ಹೆಚ್ಚುವರಿ ಮಾಹಿತಿಯನ್ನು ಒದಗಿಸಲು ನಾವು ಸದಾ ನಿಮ್ಮೊಂದಿಗಿದ್ದೇವೆ. ನಮ್ಮ ವಿನಂತಿಯನ್ನು ಪರಿಗಣಿಸಿದ್ದಕ್ಕಾಗಿ ಧನ್ಯವಾದಗಳು, ಮತ್ತು ಈ ಅರ್ಥಪೂರ್ಣ ಪ್ರಯತ್ನದಲ್ಲಿ ನಿಮ್ಮೊಂದಿಗೆ ಸಹಕರಿಸುವ ನಿರೀಕ್ಷೆಯೊಂದಿಗೆ ನಾವು ಕುತೂಹಲದಿಂದ ಕಾಯುತ್ತಿದ್ದೇವೆ.


ಇಂತಿ ನಿಮ್ಮ ಪ್ರೀತಿಯ,

Open Space Foundation

contact@openspacefoundation.in

+91-9916394958

For English, click here

Tags